ರಾಮಕ್ಷತ್ರಿಯ ಸಂಘಟನೋತ್ಸವ – ಕ್ಷೇತ್ರ ಸಮಿತಿಯೊಂದಿಗೆ ಪೂರ್ವಭಾವಿ ಸಭೆ

ರಾಮಕ್ಷತ್ರಿಯ ಸಂಘಟನೋತ್ಸವಕ್ಕೆ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರ ಸಮಿತಿಯಿಂದಿಗೆ ವಿಶ್ವ ರಾಮಕ್ಷತ್ರಿಯ ಸಂಘದ ಪದಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು. ಎರಡು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಈ ವೇಳೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಶಶಿಧರ ನಾಯ್ಕ್‌, ಉಪಾಧ್ಯಕ್ಷರುಗಳಾದ ನಾಗರಾಜ ಕೆ., ಶಿವರಾಮ ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ.ಎಸ್., ಖಚಾಂಚಿ ಬಿ. ರಾಮಕೃಷ್ಣ ಶೇರುಗಾರ್ ಸೇರಿದಂತೆ ವಿವಿಧ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



ನಿಮ್ಮದೊಂದು ಉತ್ತರ