ವಿಶ್ವರಾಮಕ್ಷತ್ರಿಯ ಸಂಘಟನೋತ್ಸವ – ರಾಮಕ್ಷತ್ರಿಯ ಪದಾಧಿಕಾರಿಗಳ ಸಮ್ಮಿಲನ

ವಿಶ್ವ ರಾಮ ಕ್ಷತ್ರಿಯ ಮಹಾಸಂಘದ ಆಶ್ರಯದಲ್ಲಿ ವಿಶ್ವರಾಮ ಕ್ಷತ್ರಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮ್ಮಿಲನ ವಿಶ್ವರಾಮ ಕ್ಷತ್ರಿಯ ಸಂಘಟನೋತ್ಸವ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಸಭಾಭವನದಲ್ಲಿ ಜರುಗಿತು.

ಮಾಜಿ ಶಾಸಕ, ವಿಶ್ವರಾಮ ಕ್ಷತ್ರಿಯ ಮಹಾ ಸಂಘ ಗೌರವಾಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಸಂಘಟನೋತ್ಸವ ಉದ್ಘಾಟಿಸಿ ಮಾತನಾಡಿ, ದೊಡ್ಡಪರಂಪರೆಯ ಸಮಾಜ ಸಂಘಟಿತವಾಗಿ ಬೆಳೆಸುವ ಅಗತ್ಯತೆ ಈಗ ಹೆಚ್ಚಿದೆ. ಸಮಾಜದ ಸಂಘಟನೆಗಳು ಏಕ ಸೂತ್ರದಡಿ ಕಾರ್ಯಾಚರಿಸುವ ಮೂಲಕ ಸಮಾಜದ ಏಳಿಗೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಶ್ವ ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ವಿಶ್ವ ರಾಮಕ್ಷತ್ರಿಯ ಮಹಾಸಂಘದ ವೆಬ್ಸೈಟ್ ಬಿಡುಗಡೆಗೊಳಿಸಿದರು. ಬೆಂಗಳೂರಿನ ಕದಂಬ ಗ್ರೂಪ್ ಆಫ್ ಹೋಟೆಲ್ನ ರಾಘವೇಂದ್ರ ಎನ್. ವಿ. ವಸ್ತುಪ್ರದರ್ಶನ, ಗೋ ಉತ್ಪನ್ನ ಮತ್ತು ಪುಸ್ತಕ ಮಳಿಗೆ ಉದ್ಘಾಟಿಸಿದರು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಸಾಂಸ್ಕೃತಿಕ ಕಲರವ ಉದ್ಘಾಟಿಸಿದರು. ಬೆಂಗಳೂರು ದಿನೇಶ್ ಪ್ರಿಂಟರ್ನ ದಿನೇಶ್ ಮಾಲೀಕ ದಿನೇಶ್ ಕುಂದಾಪುರ ವಿಶ್ವರಾಮ ಕ್ಷತ್ರೀಯ ಪತ್ರಿಕೆ ಬಿಡುಗಡೆಗೊಳಿಸಿದರು.

ಕುಂಭಾಸಿಚಂಡಿಕಾಶ್ರೀದುರ್ಗಾಪರಮೇಶ್ವರಿ ದೇವಳದ ಧರ್ಮದರ್ಶಿ ದೇವರಾಯ ಎಂ. ಶೇರೆಗಾರ್, ಹೊನ್ನಾವರ ಸ್ವರ್ಣವಲ್ಲಿ ರಾಮ ಸೀಮಾ ಪರಿಷತ್ನ ಅಧ್ಯಕ್ಷ ಎಸ್. ಕೆ. ನಾಯ್ಡ್ ಮಿರ್ಜಾನ್, ಮಲ್ಲಿಕ್ ಇಂಡಸ್ಟ್ರೀಸ್’ನ ಜಿ. ಲಕ್ಷ್ಮೀನಾರಾಯಣ, ಕುಂದಾಪುರ ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಡಿ. ಸತೀಶ್, ವಿಶ್ವ ರಾಮಕ್ಷತ್ರಯ ಮಹಾಸಂಘದ ಕಾರ್ಯಾಧ್ಯಕ್ಷ ಶೇಷಯ್ಯ ಕೊತ್ವಾಲ್ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಮಕ್ಷತ್ರಿಯ ಕುಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಪಾಧ್ಯಕ್ಷ ನಾಗರಾಜ್ ಕಾಮಧೇನು ಸ್ವಾಗತಿಸಿದರು. ಎಚ್.ಆರ್. ಶಶಿಧರ್ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಗಳಾದ ಗಣಪತಿ ಹೋಬಳಿದಾರ್ ಮತ್ತು ರಶ್ಮಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ. ಎಸ್. ವಂದಿಸಿದರು.



ನಿಮ್ಮದೊಂದು ಉತ್ತರ