1995ರಲ್ಲಿ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಎಂಬ ಹೆಸರಿನೊಂದಿಗೆ ಆರಂಭಗೊಂಡ ಸಂಸ್ಥೆಯು ಮುಂದೆ 2006ರಲ್ಲಿ ವಿಶ್ವ ರಾಮಕ್ಷತ್ರಿಯ ಮಹಾಸಂಘವಾಗಿ ಮರುನಾಮಕರಣಗೊಂಡಿತು. ನಿರಂತವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ, ಆರ್ಥಿಕವಾಗಿ, ರಾಜಕೀಯವಾಗಿ ಸಮುದಾಯದ ಸಬಲೀಕರಣ ಹಾಗೂ ಸಮುದಾಯದ ಬಡವರನ್ನು ಗುರುತಿಸಿ ಅವರನ್ನು ಮುಖ್ಯಭೂಮಿಕೆಗೆ ಬರಲು ಪ್ರೋತ್ಸಾಹ ನೀಡುವುದರ ಜೊತೆಗೆ ವಿಶ್ವದಾದ್ಯಂತ ನೆಲೆಸಿರುವ ರಾಮಕ್ಷತ್ರಿಯ ಸಮುದಾಯ ಹಾಗೂ ರಾಮಕ್ಷತ್ರಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ.

  • 1994

    ಸಂಘಟನೆಯ ಚಿಂತನೆ ಮೊಳೆಯೊಡೆದ ವರ್ಷ

    1993-94ರ ಅವಧಿಯಲ್ಲಿ ಉದ್ಯಮಿ ಜಿ. ರವೀಂದ್ರ ಗಂಗೊಳ್ಳಿ ಅವರಲ್ಲಿ ಸಮಾಜವನ್ನು ಒಗ್ಗೂಡಿಸುವ ಸಲುವಾಗಿ
    ರಾಮಕ್ಷತ್ರಿಯ ಸಂಘಟನೆಯನ್ನು ಆರಂಭಿಸುವ ಚಿಂತನೆ ಹುಟ್ಟುಕೊಂಡಿತ್ತು. ಹಲವು ತಿಂಗಳುಗಳ ಚಿಂತನೆಯ ನಂತರ ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಉಗ್ರಾಣಿ ಪಾಂಡುರಂಗ ಅವರಲ್ಲಿ ಈ ವಿಚಾರವನ್ನು ಹಂಚಿಕೊಂಡರು. ಬಳಿಕ ಸಂಘಟನೆಯ ಬಗ್ಗೆ ಒಲವಿದ್ದ ಕೆ. ಗೋವಿಂದರಾವ್ ಕಲ್ಪತರು ಅವರಿಗೆ ತಿಳಿಸಿ ಸಂಘವನ್ನು ಸ್ಥಾಪಿಸುವ ವಿಚಾರ ಮುನ್ನೆಲೆಗೆ ತರಲಾಯಿತು. ಗಂಗೊಳ್ಳಿ ಶ್ರೀ ರಾಮ ಮಂದಿರದಲ್ಲಿ ಸಮಾನ ಮನಸ್ಕರ ಸಭೆಯನ್ನು ಕರೆದು, 18 ಮಂದಿ ಸದಸ್ಯರನ್ನು ಒಳಗೊಂಡ ಕ್ರೀಯಾ ಸಮಿತಿ ರಚಿಸಲಾಯಿತು. ಇದರೊಂದಿಗೆ ಗಂಗೊಳ್ಳಿ ರಾಮಕ್ಷತ್ರಿಯ ಸಂಘ ಅಧ್ಯಕ್ಷರಾದ ಕೆ. ಎಚ್. ವಾಸುದೇವ ಶೇರುಗಾರ್ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿ, ಮಹಿಳಾ ಮಂಡಳಿ ಹಾಗೂ ಸಮಾಜದ ಭಾಂದವರ ಶುಭಾಶೀರ್ವಾದದೊಂದಿಗೆ ಸಂಘಟನಾ ಕ್ರಿಯಾ ಸಮಿತಿ ರಚನೆಗೊಂಡಿತು. ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ . ರವೀಂದ್ರ ಗಂಗೊಳ್ಳಿ ಅವರು ಆಯ್ಕೆಗೊಂಡರು.

  • 1994

    ರಾಮಕ್ಷತ್ರಿಯ ಸಂಘಟನಾ ಕ್ರಿಯಾ ಸಮಿತಿ - ಸ್ಥಾಪಕ ಪದಾಧಿಕಾರಿಗಳು

    ಅಧ್ಯಕ್ಷರು - ರವಿಂದ್ರ ಗಂಗೊಳ್ಳಿ, ಕಾರ್ಯದರ್ಶಿ - ಉಗ್ರಾಣಿ ಪಾಂಡುರಂಗ, ಕೋಶಾಧಿಕಾರಿ - ಮೇಲ್ಮನೆ ಪಾಂಡುರಂಗ,
    ಸದಸ್ಯರುಗಳು - ಜಿ. ಮಹಾಬಲ ಮಕ್ಕಿಮನೆ, ಕೆ. ಎಚ್.‌ ನರಸಿಂಹ, ಜಿ. ನರಸಿಂಹ ಕೊತ್ವಾಲ್‌, ಜಿ.ಡಿ. ಶೇಷಯ್ಯ, ರಾಮಕೃಷ್ಣ ಶೇರುಗಾರ್‌ ಬಿಜೂರು, ಸಾಹುಕಾರ ಉಪೇಂದ್ರ, ಗಂಗಾಧರ ಉಗ್ರಾಣಿಮನೆ, ಜಿ.ಡಿ. ಕೇಶವ, ಜಿ. ವಾಸುದೇವ ನಡುಮನೆ, ಜಿ. ದೇವರಾಯ ಬಾಳಯ್ಯನಮನೆ, ಜಿ.ಆರ್.‌ ಪ್ರಕಾಶ್‌, ಜಿ. ವೆಂಕಟ್ರಮಣ ಬರೆಗೆರೆ, ಜಿ. ದೇವರಾಯ ಮಕ್ಕಿಮನೆ, ಜಿ. ಮಂಜುನಾಥ ಬಗ್ಗನಮನೆ, ಜಿ. ಗಂಗಾಧರ ಹೊಸ್ಮನೆ

  • 1995

    ಸಂಘಟನೆ ಆರಂಭಗೊಂಡ ವರ್ಷ

    ರಾಮಕ್ಷತ್ರಿಯ ಸಮಾಜ ಭಾಂದವರು ನೆಲೆಸಿರುವ ಕರ್ನಾಟಕ, ಕೆರಳ ಹಾಗೂ ಮಹಾರಾಷ್ಟ್ರ ರಾಜ್ಯದ ಹಲವು ಭಾಗಗಳಿಗೆ ಸಂದರ್ಶಿಸಿ ಸಂಘಟನೆಯ ಧ್ಯೇಯವಾಕ್ಯದೊಂದಿಗೆ ಸಮಿತಿಯ ಪದಾಧಿಕಾರಿಗಳು ಸುಮಾರು 12 ಸಾವಿರದಷ್ಟು ಕಿ.ಮೀ ಸಂಚರಿಸಿ, ವಿಚಾರ ವಿನಿಮಯ ನಡೆಸಿ ಪ್ರಪ್ರಥಮವಾಗಿ ʼಕುಂದಾಪುರ ತಾಲೂಕು ರಾಮಕ್ಷತ್ರಿಯ ಸಂಘʼ ಆರಂಭಗೊಂಡಿತು. ಇದರ ಅಧ್ಯಕ್ಷರಾಗಿ ಕೆ. ಗೋವಿಂದ ರಾವ್‌ ಅವರು ಆಯ್ಕೆಗೊಂಡರು.

  • 1995

    ಪ್ರಥಮ ಸಮಾವೇಶ

    ಕ್ರಿಯಾ ಸಮಿತಿ ನೇತೃತ್ವದಲ್ಲಿ, ಗಂಗೊಳ್ಳಿ ರಾಮಕ್ಷತ್ರಿಯ ಸಂಘದ ಸಹಕಾರದೊಂದಿಗೆ ಕುಂದಾಪುರ ತಾಲೂಕು ರಾಮಕ್ಷತ್ರಿಯ ಸಂಘದ ಪ್ರಥಮ ಸಮಾವೇಶ 16, 17 ಎಪ್ರಿಲ್‌ 1995ರಂದು ಜರುಗಿತು.

  • 1995

    ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ

    ಗಂಗೊಳ್ಳಿ ನಡೆದ ಪ್ರಥಮ ಸಮಾವೇಶದಲ್ಲಿ ಕುಂದಾಪುರ ತಾಲೂಕು ರಾಮಕ್ಷತ್ರಿಯ ಸಂಘವನ್ನು ʼಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘʼ ಎಂದು ಮರುನಾಮಕರಣ ಮಾಡಲಾಯಿತು.

  • 1995

    ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘದ ಸ್ಥಾಪಕ ಪದಾಧಿಕಾರಿಗಳು

    ಅಧ್ಯಕ್ಷರು - ಕೆ. ಲಕ್ಷ್ಮೀನಾರಾಯಣ, ಉಪಾಧ್ಯಕ್ಷರು - ಗೋವಿಂದ ರಾವ್‌ ಕುಂದಾಪುರ, ಕೆ. ನಾಗೇಂದ್ರ ಉಡುಪಿ, ವಿ.ಎಸ್.‌ ನಾಯಕ್‌ ಹೊನ್ನಾವರ, ವನಿತಾ ಅಣ್ಣಪ್ಪ ನಾಯ್ಕ್‌ ಮಂಕಿ, ಯೋಗೀಶ್‌ ಕುಮಾರ್‌ ಜೆಪ್ಪು ಮಂಗಳೂರು, ವಿಶ್ವನಾಥ ಆರ್.‌ ನಾಯಕ್‌ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ - ರಾಮದಾಸ್‌ ಎಂ. ನಾಯಕ್‌ ಹುಬ್ಬಳ್ಳಿ, ಕಾರ್ಯದರ್ಶಿ - ಜಿ. ರವೀಂದ್ರ ಗಂಗೊಳ್ಳಿ, ಜಿ. ಮಹಾಬಲ ಸೇರುಗಾರ ಗಂಗೊಳ್ಳಿ, ಖಜಾಂಚಿ - ಎಚ್.‌ ಸೂರ್ಯಪ್ರಕಾಶ್‌ ಬೆಂಗಳೂರು, ಉಪಖಜಾಂಚಿ - ಕೆ.ಪ್ರಭಾಕರ ಹವಾಲ್ದಾರ್‌ ಕುಂದಾಪುರ, ಸದಸ್ಯರು - ಹೂವಯ್ಯ ಸೇರುಗಾರ ಉಪ್ಪೂರು, ರಶ್ಮಿರಾಜ್‌ ಕುಂದಾಪುರ, ಪ್ರಭಾಕರ ಕೋಡಿ, ಪ್ರಮೋದ್‌ ಆರ್.‌ ನಾಯಕ್‌ ಸುಳ್ಯ, ಬಿ. ಮಂಜುನಾಥ ಬೈಂದೂರು, ಚಂದ್ರಶೇಖರ ಬೇಕಲ್‌ ಹುಬ್ಬಳ್ಳಿ, ಬಿ. ಪುರುಷೋತ್ತಮ ಉಡುಪಿ, ಅಶೋಕ್‌ ನಾಯಕ್‌ ಹೊನ್ನಾವರ, ಎಂ.ಸಿ ನಾಯಕ್‌ ಹೊನ್ನಾವರ

  • 1995

    ಶ್ರೀ ರಾಮ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕುಂದಾಪುರ

    ಸಮಾಜದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ 03-10-1995ರಲ್ಲಿ ʼಶ್ರೀ ರಾಮ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕುಂದಾಪುರʼ ಸಂಸ್ಥೆ ಆರಂಭಿಸಲಾಯಿತು. ಇದರ ಪ್ರಥಮ ಅಧ್ಯಕ್ಷರಾಗಿ ಗೋವಿಂದ ರಾವ್‌ ಕುಂದಾಪುರ ಆಯ್ಕೆಯಾದರು.

  • 1995

    40ಕ್ಕೂ ಅಧಿಕ ಸಂಘಗಳ ಸ್ಥಾಪನೆ

    ಅಖಲ ಕರ್ನಾಟಕ ರಾಮಕ್ಷತ್ರಿಯ ಸಂಘದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ವಿವಿಧ ಊರುಗಳಲ್ಲಿ ೪೦ಕ್ಕೂ ಅಧಿಕ ರಾಮಕ್ಷತ್ರಿಯ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಲಾಯಿತು.

  • 1995

    ಕಾರ್ಯಕಾರಿ ಸಮಿತಿ ಸಭೆ

    ಕುಂದಾಪುರ, ಉಡುಪಿ, ಮಂಗಳೂರು, ಮಂಕಿ, ಬೈಂದೂರು, ಹೊನ್ನಾವರದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಸಮಾಜದ ಅಭಿವೃದ್ಧಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು.

  • 1996

    ಕಾರ್ಯಕಾರಿ ಸಮಿತಿ ಸಭೆ

    ಕುಂದಾಪುರ (3 ಭಾರಿ), ಬೆಂಗಳೂರು, ಸುಳ್ಯದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಸಮಾಜದ ಅಭಿವೃದ್ಧಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು.

  • 1996

    ಮಂಕಿಯಲ್ಲಿ ಶ್ರೀರಾಮ ಶಿಶುವಿಹಾರ ಉದ್ಘಾಟನೆ

    ದಿನಾಂಕ 19-11-1995ರಲ್ಲಿ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘದ ಪ್ರೇರಣೆಯಿಂದಿಗೆ ಮಂಕಿಯಲ್ಲಿ ಶ್ರೀರಾಮ ಶಿಶುವಿಹಾರ ಉದ್ಘಾಟನೆಗೊಂಡಿತು.

  • 1997

    ಕಾರ್ಯಕಾರಿ ಸಮಿತಿ ಸಭೆ

    ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಸಮಾಜದ ಅಭಿವೃದ್ಧಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು.

  • 1997

    ಗಂಗೊಳ್ಳಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ ಉದ್ಘಾಟನೆ

    ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಪ್ರೇರಣೆಯೊಂದಿಗೆ ಗಂಗೊಳ್ಳಿ ಪೇಟೆಯಲ್ಲಿ ದಿನಾಂಕ 19-10-1997ರಂದು ʼಗಂಗೊಳ್ಳಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ ನಿ.ʼ ಉದ್ಘಾಟನೆಗೊಂಡಿತು.

  • 1997

    ದ್ವಿತೀಯ ಸಮಾವೇಶ & ಪ್ರಥಮ ಮಹಾಸಭೆ

    ಗಂಗೊಳ್ಳಿ ರಾಮಮಂದಿರದಲ್ಲಿ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಮಾಜದ ದ್ವಿತೀಯ ಸಮಾವೇಶ ಹಾಗೂ ಪ್ರಥಮ ಮಹಾಸಭೆ 19-10-1997ರಂದು ಜರುಗಿತು.

  • 1997-99

    ಕಾರ್ಯಕಾರಿ ಸಮಿತಿ ಸಭೆ

    ಉಡುಪಿ, ಬೆಂಗಳೂರು, ಕಾರ್ಕಳ, ಕೊಪ್ಪ, ಹೊಸನಗರ, ಹೊನ್ನಾವರ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಸಮಾಜದ ಅಭಿವೃದ್ಧಿ ಸಂಘಟನೆಯ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು.

  • 1998

    ಶ್ರೀ ರಾಮ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಬೆಳ್ತಂಗಡಿ - ಉದ್ಘಾಟನೆ

    ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘದ ಪ್ರೇರಣೆಯೊಂದಿಗೆ ಬೆಳ್ತಂಗಡಿಯಲ್ಲಿ ದಿನಾಂಕ 09-04-1998ರಲ್ಲಿ ʼಶ್ರೀ ರಾಮ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ನಿ.ʼ ಉದ್ಘಾಟನೆಗೊಂಡಿತು.

  • 1998

    ಶರಾವತಿ ವಿವಿದೋದ್ದೇಶ ಸಹಕಾರಿ ಸಂಘ ನಿ. ಹೊನ್ನಾವರ - ಉದ್ಘಾಟನೆ

    ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಪ್ರೇರಣೆಯೊಂದಿಗೆ ಹೊನ್ನಾವರದಲ್ಲಿ ʼಶರಾವತಿ ವಿವಿದೋದ್ದೇಶ ಸಹಕಾರಿ ಸಂಘ ನಿ.ʼ ದಿನಾಂಕ 22-04-1998ರಂದು ಉದ್ಘಾಟನೆಗೊಂಡಿತು.

  • 1998

    ಜಂಟಿ ಸಮಾವೇಶ

    ವಿರ್ಜಾನ್‌ ಕೊಡಕಣಿಯ ಜನತಾ ವಿದ್ಯಾಲಯದಲ್ಲಿ ವಿರ್ಜಾನ ರಾಮಕ್ಷತ್ರಿಯ ಸಂಘ ರಿ. ಮಿರ್ಜಾನ ಮತ್ತು ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ರಿ. ಬೆಂಗಳೂರು ಸಹಯೋಗದೊಂದಿಗೆ ದಿನಾಂಕ 23-08-1998ರಲ್ಲಿ ಜಂಟಿ ಸಮಾವೇಶ ಆಯೋಜಿಸಲಾಯಿತು.

  • 1999

    ತೃತೀಯ ಸಮಾವೇಶ

    ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘದ ತೃತೀಯ ಮಹಾ ಸಮಾವೇಶ ಹಾಗೂ ನಾಲ್ಕನೇ ವಾರ್ಷಿಕೋತ್ಸವ ಜರುಗಿತು.

  • 2006

    ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.) - ಮರುನಾಮಕರಣ

    2006ರಲ್ಲಿ ಗಂಗೊಳ್ಳಿಯಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಶ್ರೀಮದ್‌ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆಶಯದಂತೆ ವಿವಿಧ ದೇಶಗಳಲ್ಲಿರುವ ರಾಮಕ್ಷತ್ರಿಯ ಸಂಘಟನೆಗಳನ್ನು ಒಳಗೊಳ್ಳಲು ಅನುಕೂಲವಾಗುವಂತೆ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘವನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.) ಎಂದು ಮರುನಾಮಕರಣ ಮಾಡಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.

  • 2011

    ಅಖಿಲ ಕೇರಳ ರಾಮಕ್ಷತ್ರಿಯ ಸಮ್ಮೇಳನ

    ದಿನಾಂಕ 14-08-2011ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ರಾಮರಾಜಕ್ಷತ್ರಿಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಅಖಿಲ ಕೇರಳ ರಾಮಕ್ಷತ್ರಿಯ ಸಮ್ಮೇಳನ ನಡೆಸಲಾಯಿತು.

  • 2012

    ವಿಶ್ವ ರಾಮಕ್ಷತ್ರಿಯ ಸಮಾವೇಶ

    ದಿನಾಂಕ 30-12-2022ರಂದು ರಾಮಮಂದಿರ ಗಂಗೊLಳಿಯಲ್ಲಿ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸಮ್ಮೇಳನ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

  • 2013

    ವಿಶ್ವ ರಾಮಕ್ಷತ್ರಿಯ ಮಹಾಸಂಘದ ಪ್ರಥಮ ಸಭೆ

    2013ರ ನಂತರದ ಸಾಲಿನಲ್ಲಿ ಪ್ರಥಮ ಸಭೆಯ ದಿನಾಂಕ 23-06-2013ರಂದು ಶಿವಮೊಗ್ಗ ರಾಮಕ್ಷತ್ರಿಯ ಯುವ ವೇದಿಕೆಯ ಸಹಭಾಗಿತ್ವದಲ್ಲಿ ಜರುಗಿತು.

  • 2013

    ಮಹಾಸಂಘದ ದ್ವಿತೀಯ ಸಭೆ

    ರಾಮಕ್ಷತ್ರಿಯ ಮಹಾಸಂಘದ ದ್ವಿತೀಯ ಸಭೆ ದಿನಾಂಕ 21-07-2013ರಂದು ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಜರುಗಿತು. ಈ ವೇಳೆ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನಿಸಲಾಯಿತು.

  • 2013

    ಮಹಾಸಂಘದ ತೃತೀಯ ಸಭೆ

    ವಿಶ್ವ ರಾಮಕ್ಷತ್ರಿಯ ಮಹಾಸಂಘದ ತೃತೀಯ ಸಭೆ ದಿನಾಂಕ 27-10-2013ರಂದು ಜರುಗಿತು. ಈ ಸಂದರ್ಭ ಶ್ರೀ ಗಂಗಾಧರೇಂದ್ರ ಸರಸ್ವತಿ ತೀರ್ಥ ಸ್ವಾಮೀಜಿಗಳು ಉಪಸ್ಥಿತರಿದ್ದು ಸಂಘದ ಪ್ರಗತಿಗೆ ಸಲಹೆ ಸೂಚನೆಗಳನ್ನು ನೀಡಿ ಆಶೀರ್ವದಿಸಿದರು.

  • 2013

    ಚತುರ್ಥ ಸಭೆ

    ವಿಶ್ವ ರಾಮಕ್ಷತ್ರಿಯ ಮಹಾಸಂಘದ ಚತುರ್ಥ ಸಭೆ ಮಂಗಳೂರು ರಾಮಕ್ಷತ್ರಿಯ ಸಂಘದ ಆಶ್ರಯದಲ್ಲಿ ದಿನಾಂಕ 24-11-2013ರಂದು ನಡೆಯಿತು. ಸಮಾಜ ಭಾಂದವರ ʼಚಿಂತನ-ಮಂಥನʼದೊಂದಿಗೆ ಸಭೆ ಆರಂಭಗೊಂಡು ವಿವಿಧ ವಿಚಾರಗಳು ಚರ್ಚೆಗೆ ಬಂದವು.

  • 2014

    ರಾಮಕ್ಷತ್ರಿಯ ಸಂಘಗಳ ಪದಾಧಿಕಾರಿಗಳ ಸಮಾವೇಶ

    ವಿಶ್ವರಾಮಕ್ಷತ್ರಿಯ ಮಹಾಸಂಘದ ನೇತೃತ್ವದಲ್ಲಿ, ಉಡುಪಿ ರಾಮಕ್ಷತ್ರಿಯ ಸಂಘದ ಆತಿಥ್ಯದಲ್ಲಿ ರಾಮಕ್ಷತ್ರಿಯ ಸಂಘಗಳ ಪದಾಧಿಕಾರಿಗಳ ಸಮಾವೇಶ ದಿನಾಂಕ 09-02-2014ರಂದು ಜರುಗಿತು.

  • 2019

    ರಾಮಕ್ಷತ್ರಿಯರ ಬೃಹತ್‌ ಸಮಾವೇಶ

    ವಿಶ್ವ ರಾಮಕ್ಷತ್ರಿಯ ಮಹಾಸಂಘ ಮತ್ತು ಸ್ವರ್ಣವಲ್ಲಿ ರಾಮಕ್ಷತ್ರಿಯ ಸೀಮಾ ಪರಿಷತ್‌ ಹೊನ್ನಾವರ ಇವರ ಸಹಭಾಗಿತ್ವದಲ್ಲಿ ರಾಮಕ್ಷತ್ರಿಯರ ಬೃಹತ್‌ ಸಮಾವೇಶ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ. ಎಸ್.‌ ಯಡಿಯೂರಪ್ಪ ಅವರ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಸಮಾಜದ ಅಭಿವೃದ್ಧಿ ವಿಚಾರವಾಗಿ ಗೋಷ್ಠಿಗಳು, ರಾಮತಾರಕ ಮಂತ್ರದ ಜಪ ಮತ್ತು ಹವನ ನಡೆಯಿತು. ರಾಮಕ್ಷತ್ರಿಯ‌ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮವನ್ನು ಸ್ಥಾಪಿಸುವಂತೆ ಈ ಸಂದರ್ಭ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಯಿತು.

  • 2021

    ರಜತ ಸಿಂಚನ ಕಾರ್ಯಕ್ರಮ

    ವಿಶ್ವ ರಾಮಕ್ಷತ್ರಿಯ ಮಹಾಸಂಘವು 25 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ದಿನಾಂಕ 31-01-2021ರಂದು ತೀರ್ಥಹಳ್ಳಿ ರಾಮಕ್ಷತ್ರಿಯ ಸಂಘದ ಆತಿಥ್ಯದೊಂದಿಗೆ ತೀರ್ಥಹಳ್ಳಿಯಲ್ಲಿ ರಜತ ಸಿಂಚನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

  • 2022

    ರಾಮಕ್ಷತ್ರಿಯ ಸಂಘಟನೋತ್ಸವ

    ವಿಶ್ವದಾದ್ಯಂತ ಇರುವ ವಿವಿಧ ರಾಮಕ್ಷತ್ರಿಯ ಸಂಘ ಸಂಸ್ಥೆಗಳನ್ನು ಒಗ್ಗೂಡಿಸುವುದು, ಬಲವರ್ಧನೆ ಹಾಗೂ ಆ ಮೂಲಕ ಸಮಾಜದ ಅಭಿವೃದ್ಧಿಗೆ ನೆರವಾಗುವ ಉದ್ದೇಶದೊಂದಿಗೆ ಮೇ.14 & 15ರಂದು ಕುಂಭಾಶಿ ಶ್ರಿ ಚಂಡಿಕಾ ದುರ್ಗಾಪರಮೇಶ್ವರೀ ದೇವಳದ ಸಭಾಭವನದಲ್ಲಿ ʼರಾಮಕ್ಷತ್ರಿಯ ಸಂಘಟನೋತ್ಸವʼ - ರಾಮಕ್ಷತ್ರಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮ್ಮೀಲನ ಕಾರ್ಯಕ್ರಮ ಜರುಗಿತು. 2 ದಿನಗಳ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸಂಘಗಳ ಬಲವರ್ಧನೆ, ಸಮಾಜದ ಅಭಿವೃದ್ಧಿ ಮೊದಲಾದ ವಿಚಾರಗಳ ಬಗ್ಗೆ ಗೋಷ್ಠಿ, ಚರ್ಚೆಗಳು ನಡೆದವು.

  • 28 ವರ್ಷಗಳಲ್ಲಿ ವಿವಿಧ ನೆರವು

    ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ.

    ವಿಶ್ವ ರಾಮಕ್ಷತ್ರಿಯ ಮಹಾಸಂಘವು ಕಳೆದ 28 ವರ್ಷಗಳಿಂದ ಸಕ್ರಿಯವಾಗಿದ್ದು, ವಿವಿಧ ಹಂತದಲ್ಲಿ ವಿವಿಧ ಊರುಗಳಲ್ಲಿ ರಾಮಕ್ಷತ್ರಿಯ ಸಂಘಗಳ ಸ್ಥಾಪನೆ, ಆರ್ಥಿಕ ಸಂಸ್ಥೆಗಳ ಸ್ಥಾಪನೆ, ಸಭಾಭವನ ಸ್ಥಾಪನೆ, ಸಮಾಜದ ಗಣ್ಯರ ಮೂಲಕ ಅಗತ್ಯವುಳ್ಳವರಿಗೆ ನೆರವು ಹೀಗೆ ಹತ್ತಾರು ಕಾರ್ಯಗಳ ಮೂಲಕ ರಾಮಕ್ಷತ್ರಿಯ ಸಂಘಗಳಿಗೆ ಪ್ರೇರಣೆಯಾಗಿ ನಿಂತು ಬೆಂಬಲಿಸುತ್ತಾ ಬಂದಿದೆ.

  • 2022

    ವಿಶ್ವ ರಾಮಕ್ಷತ್ರಿಯ ಮಹಾಸಂಘದ ಯೋಜನೆ

    ವಿಶ್ವ ರಾಮಕ್ಷತ್ರಿಯ ಮಹಾಸಂಘದ ಮೂಲಕ ಏಕೀಕೃತ ಸಹಕಾರಿ ಸಂಸ್ಥೆಯ ಸ್ಥಾಪನೆ, ಆಯುರ್ವೇದ ಮೆಡಿಕಲ್ ಸ್ಥಾಪನೆ, ಶೈಕ್ಷಣಿಕ ದತ್ತು ಸ್ವೀಕಾರ, ಬ್ರಹ್ಮೋಪದೇಶ, ಸಾಮೂಹಿಕ ವಿವಾಹ ನಡೆಯುವ ಯೋಜನೆಯನ್ನು ಆರಂಭದಿಂದಲೂ ಹೊಂದಿದ್ದು, ಹಾಲಿ ಸಮಿತಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ರಾಮಕ್ಷತ್ರಿಯ ಸಮಾಜದವರಿಗೆ ನೆರವಾಗುವ ಯೋಜನೆ ಅನುಷ್ಠಾನಗೊಳಿಸಲು ಉತ್ಸುಕವಾಗಿದೆ.